MY WRITINGS

Ondu muttina kate


Ondu muttina kate is one of my writing about the Kiss. the first stanza about the kiss in act or before. second stanza is about situation after the Kiss.. the sketch is also drawn by me.----------------------------------------------------------------------------------


  ನರಿ ಮದುವೆ

ದಟ್ಟಾರಣ್ಯದಲ್ಲಿ ವಾಸವಗಿದ್ದ ಎರಡು ನರಿಗಳಿಗೆ ಚೈತ್ರ ಮಾಸದ ಒಂದು ಸುದಿನದಂದು ಮದುವೆ ನಿಗಧಿಯಾಯಿತು. ಆ ನವಜೊಡಿಯು ತಮ್ಮ ಮದುವೆಯನ್ನು ಯಾರೂ ಈ ಹಿಂದೆ ಮಾಡಿರಲಾಗದ, ಮುಂದೆಂದೂ ಮಾಡಲಾರದ ರೀತಿಯಲ್ಲಿ, ಕಾಡಿನ ಪ್ರತಿಯೊಂದು ಪ್ರಾಣಿಯನ್ನೂ ಆಹ್ವಾನಿಸಿ ತುಂಬಾ ಅಧೂರಿಯಾಗಿ ಮದುವೆ ಮಾದಿಕೊಳ್ಳುವುದಾಗಿ ಆಲೋಚಿಸಿ, ತುಂಬಾ ಮುತುವರ್ಜಿ ಮತ್ತು ವುತ್ಸಾಹದಿಂದ ತಾವೆ ಮುಂದೆನಿಂತು ಮದುವೆಯ ಸಿದ್ದತೆಯನ್ನು ಆರಂಬಿಸಿದ್ದವು. ಮದುವೆಗೆ ಬೆಕಾದ ಸಾಮಗ್ರಿ ಸರಂಜಾಮುಗಳನ್ನ ಕಲೆಹಾಕಿ ಇನ್ನೆನು ಮದುವೆಗೆ ಮೂರೆ ದಿನ ಬಾಕಿ ಉಳಿದಿದೆ. ಆ ಜೋಡಿ ಲಗ್ನಪತ್ರಿಕೆಯನ್ನ ಕೈಲಿಡಿದು ಸಿಂಹ ರಾಜನ ಬಳಿಗೆ ಬಂದು ತುಂಬಾ ನಮ್ರವಾಗಿ ನಮಸ್ಕರಿಸಿ ಮದುವೆಯ ಕಾರೆಯೋಲೆಯನ್ನ ತಿಳಿಸಿ, ನೇರವಾಗಿ ಕತ್ತೆರಯನ ಮನೆಗೆ ಹೊರಟವು. ತುಂಬಾ ಆತ್ಮೀಯವಾಗಿ ಮಾತನಾಡಿ "ನೀವು ಮದುವೆಗೆ ಬರಲೇಬೇಕು, ನೀವು ಬಾರದೇ ಹೋದರೆ ನಮ್ಮ ಮದುವೆ ನಡೆಯಲಾರದು. ಯಾವುದೇ ಕಾರಣಕ್ಕೂ ನೀವು ಬಾರದಿರಕೂಡದು" ಎಂದು ತುಂಬಾ ಬಲವಂತವಾಗಿ ಆಹ್ವಾನಿಸಿ, ಹಾಗೆ ಶ್ವಾನಧಳ, ಕುದುರೆ, ಆನೆ, ಕೋಗಿಲೆ, ಹುಲಿ ಉಳಿದ ಎಲ್ಲಾ ಪ್ರಣಿಗಳನ್ನೂ ಆಹ್ವಾನಿಸಿ ಮನೆಗೆ ಹಿಂತಿರುಗಿದವು.

ಮದುವೆಯ ದಿನ ಬಂದೇಬಿಟ್ಟಿತು, ಎಲ್ಲೆಲ್ಲೂ ಸಡಗರದ ವಾತವರಣ. ಸಿಹಿಊಟ, ಬಾಡೂಟ, ತೆರತೆರನಾದ ಭೋಜನಗಳು ಸಿದ್ದವಾಗಿದ್ದವು. ರಾಜಬೀದಿಗಳು ಚಪ್ಪರ ಮತ್ತು ಹೂವುಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ. ಕಾಡಿನ ಪ್ರಾಣಿಗಳು ಹಿಂಡು ಹಿಂಡಾಗಿ ಮದುವೆಯ ಮನೆಯಕಡೆ ಪ್ರಯಾಣ ಬೆಳೆಸಿವೆ. ಮಾತಿನಂತೆ ಮದುವೆ ಮನೆಗೆ ಮೊದಲು ಬಂದಿದ್ದು ಕತ್ತೆರಾಯ, ಶ್ವಾನಧಳ, ಹಂದಿಪಡೆ. ಆ ನವ ಜೋಡಿಗಳು ಅವರನ್ನು ಸ್ವಾಗತಿಸಿ, "ನಮ್ಮ ಕರೆಯನ್ನ ಗೌರವಿಸಿ ನೀವು ಆಗಮಿಸಿದ್ದಕ್ಕೆ ತುಂಬಾ ದನ್ಯವಾಧಗಳು. ನೀವೇ ಮುನ್ದೆನಿಂತು ಈ ಮದುವೆಯನ್ನ ನಡೆಸಿಕೊಡಬೇಕಾಗಿ ನಿಮ್ಮಲ್ಲಿ ನಮ್ಮ ಮನವಿ". "ಕತ್ತೆರಾಯರೆ ನೀವು ಇಲ್ಲಿರುವ ಸಾಮಗ್ರಿ ಸರಂಜಾಮುಗಳನ್ನ ಮದುವೆಯ ಮಂಟಪಕ್ಕೆ ಸಾಗಿಸಬೇಕು ಈ ಕಾರ್ಯ ನಿಮ್ಮಿಂದಲ್ಲದೆ ಬೇರೆ ಯಾರಿಣ್ದಲೂ ಸಾದ್ಯವಾಗದು". ಕತ್ತೆರಾಯರು ತುಂಬಾ ಉತ್ಸುಕತೆಇಂದ ಹೊರಟವು. ಶ್ವಾನಧಳಕ್ಕೆ ಅಲ್ಲಿನ ಸಾಮಗ್ರಿಗಳು ಹಾಗು ಬೋಜನವನ್ನ ಕಾಯುವುದು ಮತ್ತು ಅಥಿತಿಗಳು ಬಂದಾಗ ಅವರ ಪಾದರಕ್ಷೆಗಳನ್ನ ಕಾಯುವುದು, ಹಂದಿಪಡೆಗೆ ಅಲ್ಲಿನ ಕಸಗುಡಿಸಿ ಸ್ವಚ್ಚಗೊಳಿಸುವ ಕಾರ್ಯ ಸೂಚಿಸಲಾಯಿತು. ಎಲ್ಲರೂ ತುಂಬಾ ಮುತುವರ್ಜಿಯಿಂದ ತಾನೇ ಈ ಮದುವೆಯ ಮುಖ್ಯ ಅಥಿತಿ ಎಂಬುದಾಗಿ ಭಾವಿಸಿ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾದರು.

ಎರಡನೇ ಹಂತವಾಗಿ ನೃತ್ಯಗಾರ್ತಿ ನವಿಲುರಾಣಿ, ಡೋಲು ಬಾರಿಸೊ ಗೋರಿಲ್ಲಾ, ಮೆರವಣಿಗೆ ಕುದುರೆ, ಆಡುಗಾರ್ತಿ ಕೋಗಿಲೆ, ಮಂತ್ರ ಪಟಿಸೋ ಗಿಳಿರಾಮ, ಎಲ್ಲರೂ ಬಂದು ತಮ್ಮ ತಮ್ಮ ಸಿದ್ದತೆಗಳನ್ನ ಮಾಡಿಕೊಳ್ಳಲರಂಬಿಸಿದರು, ಇನ್ನೆನು ಸಿದ್ದತೆಗಳೆಲ್ಲಾ ಮುಗಿದವು. ಈಗ ಆ ಜೋಡಿ ನರಿಗಳು ಮನೆಇಂದ ಮಂಟಪದವರೆಗೆ ಮೆರವಣಿಗೆ ಹೊರಡೋ ಸಮಯ.

ಸಮಯಕ್ಕೆ ಸರಿಯಾಗಿ ಅಲಂಕೃತವಾದ ಗಜರಾಜ ಮತು ಒಂಟೆಗಳು ಬಂದವು. ನಂತರ ಕಾಡಿನ ಉಪರಾಜ ಹುಲಿ, ಕಡೇಯದಾಗಿ ಕಾಡಿನ ರಾಜ ಸಿಂಹ ಬರುತ್ತಿದ್ದಹಾಗೆಯೇ ಎಲ್ಲೆಲ್ಲು ಓಲಗದ ಸದ್ದು ಮೊಳಗಿತು ಏಲ್ಲರೂ ಜೈಕಾರ ಹಕತೊಡಗಿದರು, ಜಿಂಕೆಗಳಿಂದ ಆರತಿ ಮಾಡಿಯಾಯಿತು. ಹೂವಿನ ಹಾಸಿಗೆಯ ಮೇಲೆ ನಡೆಯುತ್ತ ಬಂದ ಅವರು, ಅಂಬಾರಿಯನ್ನೊತ್ತು ಸಿದ್ದವಗಿ ನಿಂತಿದ್ದ ಗಜರಾಜನ ಮೇಲೆ ಸಿಂಹ ಮತ್ತು ಒಂಟೆಯ ಮೇಲೆ ಹುಲಿಯೂ ಅಂಭಾರಿಯನ್ನ ಅಲಂಕರಿಸಿದರು. ಮೆರವಣಿಗೆ ಹೊರಟಿತು. ಕುದುರೆಯ ಮೇಲೆ ನವ ನರಿ ಜೋಡಿಗಳು ಕೂತಿವೆ, ನವಿಲಿನ ನೃತ್ಯವನ್ನ ಆನಂದಿಸುತಾ, ಢೊಲು ನಗಾರಿಗಳ ಸದ್ದಿನೊಂದಿಗೆ ಮೆರವಣಿಗೆ ಹೊರಟಿದೆ. ಕತ್ತೆರಾಯರು ಮೆರವಣಿಗೆಯ ಕೊನೆಯಲ್ಲಿ ಮೂಟೆಗಳನ್ನ ಹೊತ್ತು ಬರುತ್ತಿದ್ದರೆ, ಶ್ವಾನಧಳ ಮಂಟಪದ ಬಳಿ ಕಾಯುವ ಕಾರ್ಯದಲ್ಲಿವೆ, ಹಂದಿಪಡೆ ಸ್ವಚ್ಚತಾ ಕಾರ್ಯದಲ್ಲಿವೆ.

ಸಿಂಹರಾಜನ ಸಮಕ್ಷಮದಲ್ಲಿ ಮದುವೆ ಮುಗಿಯಿತು, ಎಲ್ಲರ ಊಟವೂ ಮುಗಿಯಿತು. ಸಿಂಹ ಮತ್ತು ಹುಲಿರಾಜರಿಗೆ ಉಡುಗೊರೆಯನ್ನು ಕೊಟ್ಟು ಬೀಳ್ಕೊಡಲಾಯಿತು. ಉಳಿದ ನವಿಲುರಾಣಿ, ಗಿಳಿರಾಮ, ಒಂಟೆಗಳಿಗೆ ಸಂಬಾವನೆಯನ್ನ  ಕೊಟ್ಟು ಕಳುಹಿಸಿಕೊಡಲಾಯಿತು. ಆದರೆ ಕತ್ತೆರಾಯ, ಶ್ವಾನಧಳ, ಹಂದಿಪಡೆಗಳಿಗೆ ಊಟ ಮಿಕ್ಕಿರಲಿಲ್ಲ. ಕತ್ತೆರಾಯ ಪೆಪರನ್ನು ಆಯ್ದು ತಿಂದರೆ, ಶ್ವಾನಧಳ, ಹಂದಿಪಡೆ ಅಲ್ಲಿನ ಎಂಜಲು ಎಲೆಗಳನ್ನ ನೆಕ್ಕಿ, ತಿನ್ನಲಾರಂಬಿಸಿದವು. ಅಲ್ಲಿಗೆ ಬಂದ ನರಿಜೋದಿಗಳು "ನಿಮ್ಮೆಲ್ಲರಿಗೂ ನಮ್ಮ ಒಂದನೆಗಳು, ನೀವು ಬಾರದೇಹೊಗಿದ್ದರೆ ಮದುವೆ ಆಗುತ್ತಲೇಇರಲಿಲ್ಲವೆಂದು ಕಣುತ್ತಿತ್ತು." ಎಂದು ಹೇಳಿ ಮಿಕ್ಕ ಅಲ್ಪಸ್ವಲ್ಪ ತಿಂಡಿಯನ್ನ ಪೊಟ್ಟಣದಲ್ಲಿ ತುಂಬಿ ಅವರಿಗೆ ಕೊಟ್ಟು ಕಳುಹಿಸಲಾಯಿತು.


ನೀತಿ:-
ಮಕ್ಕಳೆ ಈ ಕತೆಯಲ್ಲಿ ಬರೋ ಪ್ರತಿಯೊಂದು ಪ್ರಾಣಿನೂ ನಮ್ಮ ನಮ್ಮ ಪ್ರತಿರೂಪ. ಈ ವಿವಾಹ ಸಮಾರಂಬದಲ್ಲಿ ನೀವು ಯಾವ ಸ್ಥನವನ್ನ ಅಲಂಕರಿಸಿದ್ದೀರಿ ಎಂದು ಗುರುತಿಸಿ. ಸಿಂಹ ಮತ್ತು ಹುಲಿಯಂತಹ ಸೆಲಬ್ರೆಟಿಯೋ?, ಗಿಳಿ, ನವಿಲಿನಂತಹ ಗೌರವಯುತ ಹುದ್ದೆಯೋ? ಅಥವ ನಾಯಿ, ಕತ್ತೆಯಂತಹ ಸಮಾನ್ಯ ಕೆಲಸಗಾರನೋ?. ನಂತರ ನೀವೆನಾಗಬೆಕೆಂದು ನಿರ್ಧರಿಸಿ., ಅದಕ್ಕೆ ಪೂರಕವಾದ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಆರಂಬಿಸಿ.

                                           

No comments:

Post a Comment

Thanks for commenting and feedback..